Wednesday, 23 January 2019

ಕೈಗಳಿಂದ ತಿನ್ನುವ ಹಿಂದಿನ ವಿಜ್ಞಾನ

ಕೈಗಳಿಂದ ತಿನ್ನುವ ಹಿಂದಿನ ವಿಜ್ಞಾನ

👉ಬಹಳ ಜನರು ಕೈಗಳಿಂದ ತಿನ್ನುವುದು ಅನಾರೋಗ್ಯಕರ ಮತ್ತು ಅಸಹ್ಯಕರ ಎಂದು ಭಾವಿಸುತ್ತಾರೆ.ಆದರೆ ಕೈಗಳಿಂದ ಆಹಾರ ತಿನ್ನುವುದರ ಸಂಬಂಧ ಕೇವಲ ದೇಹದೊಂದಿಗೆ ಮಾತ್ರವಲ್ಲ, ಮನಸ್ಸಿನ ಮತ್ತು ಆತ್ಮದೊಂದಿಗೆ ಕೂಡ ಇದೆ.ಈಗ ಇದರ ಲಾಭಗಳನ್ನು ನೋಡೋಣ.

👉ನಮ್ಮ ಪ್ರಾಚೀನ ಸಂಪ್ರದಾಯದಲ್ಲಿ ಕೈಗಳಿಂದ ತಿನ್ನುವ ಅಭ್ಯಾಸ ಮುದ್ರಾ ಭಂಗಿಗಳಿಂದ ಪಡೆಯಲಾಗಿದೆ ಮತ್ತು ಇದು ಹಿಂದೂ ಧರ್ಮದ ಹಲವು ಅಂಶಗಳಲ್ಲಿ ವ್ಯಾಪಿಸಿದೆ. ನಮಗೆ ತಿಳಿದಂತೆ ಮುದ್ರೆಗಳನ್ನು ಯೋಗ ಮತ್ತು ಧ್ಯಾನಗಳಲ್ಲಿ ಬಳಸುತ್ತೇವೆ.ಹಲವು ಶಾಸ್ತ್ರೀಯ ನೃತ್ಯಗಳಲ್ಲಿ ಕೈ ಭಂಗಿಗಳು ಮುಖ್ಯವಾಗಿವೆ.

👉ವೈದಿಕ ಜ್ಞಾನದ ಪ್ರಕಾರ ನಮ್ಮ ಕೈ ಮತ್ತು ಕಾಲುಗಳು ಐದು ಅಂಶಗಳನ್ನು ಒಳಗೊಂಡಿದೆ, ಅವು ಆಕಾಶ, ಗಾಳಿ, ಅಗ್ನಿ, ನೀರು ಮತ್ತು ಭೂಮಿ. ಕೈಗಳಿಂದ ತಿನ್ನುವ ಅಭ್ಯಾಸವನ್ನು ಆಯುರ್ವೇದದಲ್ಲಿ ಸಹಾ ಪ್ರಸ್ತಾಪಿಸಿದ್ದಾರೆ. ಆಯುರ್ವೇದದ ಪ್ರಕಾರ ಕೈಯ ಬೆರಳುಗಳು ಪಂಚತತ್ವಗಳಲ್ಲಿ ಒಂದನ್ನು ಹೊಂದಿರುತ್ತದೆ.
   
     🔸ಹೆಬ್ಬೆರಳು : ಅಗ್ನಿ
     🔸ತೋರುಬೆರಳು : ವಾಯು
     🔸ಮಧ್ಯಬೆರಳು : ಆಕಾಶ
     🔸ಉಂಗುರಬೆರಳು : ಭೂಮಿ
     🔸ಕಿರಿಬೆರಳು : ನೀರು

👉ಮಾನವನ ಜೀರ್ಣಾಂಗ ವ್ಯವಸ್ಥೆಗೆ ಹೋಗುವ ಮೊದಲು ಆಹಾರವನ್ನು ಬೆರಳುಗಳು ಜೀರ್ಣಕಾರಿ ರೂಪಕ್ಕೆ ರೂಪಾಂತರಗೊಳಿಸುತ್ತವೆ. ಸುಧಾರಿತ ಜೀರ್ಣಕ್ರಿಯೆ ರುಚಿ ತಿನ್ನುವ ಸಂತೋಷ, ರುಚಿಯನ್ನು ಹೆಚ್ಚಿಸುತ್ತದೆ. ಕೈಗಳಿಂದ ತಿನ್ನುವುದರಿಂದ ಸುವಾಸನೆ ಮತ್ತು ಉತ್ತಮ ಭಾವನೆ ಇರುತ್ತದೆ.

👉ಚರ್ಮವು ಆಹಾರದ ಬಿಸಿ, ಮೃದುತ್ವದ ಬಾವವನ್ನು ಮೆದುಳಿಗೆ ಕಳಿಸುತ್ತದೆ ಮತ್ತು ಇದು ಆಹಾರ ಜೀರ್ಣಿಸುವ ಜೀರ್ಣರಸಗಳ ಉತ್ಪಾದನೆಯನ್ನು ಪ್ರಚೋದಿಸುತ್ತದೆ.

👉ಕೈಯಿಂದ ತಿನ್ನುವುದರಿಂದ ಆಹಾರದ ಬಿಸಿ ಗೊತ್ತಾಗುತ್ತದೆ ಮತ್ತು ಇದರಿಂದ ಬಾಯಿ ಸುಡುವುದು ತಪ್ಪುತ್ತದೆ.

👉ಕೆಲವರ ನಂಬಿಕೆಯ ಪ್ರಕಾರ ಕೈಯಿಂದ ಆಹಾರ ಬಾಯಿಗೆ ಹೋಗುವಾಗ ಶುದ್ದವಾಗುತ್ತದೆ. ಇದೆ ತರಹದ ಸಂಪ್ರದಾಯವನ್ನು ಇತರ ಧರ್ಮಗಳಲ್ಲೂ ಪಾಲಿಸುತ್ತಾರೆ, ಅವರು ಊಟಕ್ಕೆ ಮೊದಲು ಕೈಯನ್ನು ಆಹಾರದ ಮೇಲೆ ಇಡುತ್ತಾರೆ.

👉ಇದರ ಹಿಂದಿನ ತತ್ವವೇನೆಂದರೆ ಆಹಾರದಲ್ಲಿ ಧನಾತ್ಮಕ, ಋಣಾತ್ಮಕ, ನೋವುಗಳು, ಭಾವನೆಗಳು, ಆಲೋಚನೆಗಳು ಮುಂತಾದ ಬಾಹ್ಯ ಶಕ್ತಿಗಳಿರುತ್ತದೆ. ಇವು ತರಕಾರಿ ಮಾರಾಟಗಾರರು, ಅಂಗಡಿಯವರು, ಅಡಿಗೆಯವರು ಹೀಗೆ ಹಲವರಿಂದ ಹರಿದು ಬಂದಿರುತ್ತದೆ. ಹೀಗೆ ಮನುಷ್ಯನ ಆತ್ಮಶಕ್ತಿಗೆ ಹಾನಿಯುಂಟುಮಾಡುವ ಶಕ್ತಿಗಳಿಂದ ಕೈ ಆಹಾರವನ್ನು ಶುದ್ದಿಕರಿಸುತ್ತದೆ.

👉ಇದೇ ತರಹದ ಅನುಭವವನ್ನು ವಿದೇಶಗಳಿಂದ ಬರುವ ಜನರು ಅನುಭವಿಸುತ್ತಾರೆ, ಅವರು ಫೋರ್ಕ್ ಮತ್ತು ಚಮಚಗಳಿಂದ ಊಟಮಾಡುವಾಗ ಉಸಿರುಗಟ್ಟುವಿಕೆ ಮತ್ತು  ಋಣಾತ್ಮಕ ಬಾವನೆಗಳು ಉಂಟಾಗುತ್ತದೆ. ಅದೇ ಅವರು ಕೈಯಿಂದ ಊಟ ಮಾಡುವುದರಿಂದ ದಿವ್ಯವಾದ ಸುಂದರ ಭಾವನೆ ಬರುತ್ತದೆ.

👉ನಮ್ಮ ಚರ್ಮದಲ್ಲಿ ನಾರ್ಮಲ್ ಫ್ಲೋರಾ ಎನ್ನುವ ಜೀವಾಣುಗಳಿರುತ್ತವೆ. ಇವುಗಳು ಮನುಷ್ಯರಿಗೆ ಹಾನಿಕಾರಕವಲ್ಲ ಆದರೆ ಅವುಗಳು ಹೊರಜಗತ್ತಿನ ಹಾನಿಕಾರಕ ಜೀವಾಣುಗಳಿಂದ ರಕ್ಷಿಸುತ್ತದೆ.

👉ನಮ್ಮ ಉತ್ತಮ ಆರೋಗ್ಯಕ್ಕಾಗಿ ಬಾಯಿ, ಗಂಟಲು, ಕರಳುಗಳು ಮುಂತಾದ ದೇಹದ ಬಾಗಗಳಲ್ಲಿ ನಾರ್ಮಲ್ ಫ್ಲೋರಾ ಎನ್ನುವ ಜೀವಾಣುಗಳನ್ನು ಬೆಳೆಸುವುದು ಅಗತ್ಯವಾಗಿದೆ.
ಚಮಚಗಳಿಂದ ಊಟಮಾಡುವ ಅಭ್ಯಾಸದಿಂದ ಜೀರ್ಣಾಂಗದಲ್ಲಿ ನಾರ್ಮಲ್ ಫ್ಲೋರಾದ ವ್ಯವಸ್ಥೆ ಹಾಳಾಗಬಹುದು. ಇದರಿಂದ ಹೊರಗಿನ ಹಾನಿಕಾರಕ ಜೀವಾಣುಗಳಿಂದ ರೋಗ ನಿರೋಧಕಶಕ್ತಿ ಕಡಿಮೆಯಾಗುತ್ತದೆ.

👉ಉದಾಹರಣೆಗೆ ವಿದೇಶಗಳಿಂದ ಬಂದ ಜನರು ಇಲ್ಲಿ ಬಹಳ ವರ್ಷ ನೆಲೆಸಿದ ನಂತರ ಜಟರಸಂಬಂದಿ ಕಾಯಿಲೆಗಳಿಂದ ಬಳಲುತ್ತಾರೆ, ಆದರೆ ಇಲ್ಲಿನ ಜನರಿಗೆ ಆತೊಂದರೆ ಇರುವುದಿಲ್ಲ ಏಕೆಂದರೆ ಇವರ ನಾರ್ಮಲ್ ಫ್ಲೋರಾ ಸಂತುಲಿತವಾಗಿರುತ್ತದೆ.

🔸ಕರಾಗ್ರೆ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ
ಕರಮೂಲೇ ತು ಗೋವಿಂದಃ ಪ್ರಭಾತೆ ಕರದರ್ಶನಮ್

👉ಅಂದರೆ ಕೈಗಳ ಮುಂದಿನ ಭಾಗದಲ್ಲಿ ಲಕ್ಷ್ಮೀ ವಾಸಿಸುತ್ತಾಳೆ. ಕೈಗಳ ಮಧ್ಯಭಾಗದಲ್ಲಿ ಸರಸ್ವತಿ ನೆಲೆಸಿದ್ದಾಳೆ ಮತ್ತು ಮೂಲಭಾಗದಲ್ಲಿ ಗೋವಿಂದನಿದ್ದಾನೆ. ಹೀಗಾಗಿ  ಬೆಳಗ್ಗೆ ಎದ್ದ ಕೂಡಲೆ ಕೈಗಳ ದರ್ಶನವನ್ನು ಪಡೆದುಕೊಳ್ಳಬೇಕು. ಈ ಶ್ಲೋಕ, ದೈವತ್ವ ನಮ್ಮ ಕೈಗಳ ಒಳಗೆ ಇರುತ್ತದೆ ಎಂಬುದನ್ನು ಸೂಚಿಸುತ್ತದೆ.

👉ಹಿಂದೂ ಸಂಸ್ಕೃತಿಯಲ್ಲಿನ ಅನೇಕ ವಿಷಯಗಳು ವಿಲಕ್ಷಣ ಮತ್ತು ಅಸಾಮಾನ್ಯವಾಗಿ ತೋರುತ್ತದೆ, ಆದರೆ ನಾವು ಒಮ್ಮೆ ಅದರ ಆಳಕ್ಕೆ ಇಳಿದರೆ ಆಶ್ಚರ್ಯಕರವಾದ ಅನೇಕ ವಿಷಯಗಳು ಸಿಗುತ್ತದೆ ಮತ್ತು ವಿಶಾಲವಾದ ಜ್ಞಾನ ವೈದಿಕ ಸಂಸ್ಕೃತಿಯಲ್ಲಿ ಅಡಗಿದೆ. (ಮಾಹಿತಿ ಕೃಪೆ: ಅಧ್ಯಾತ್ಮ ಸಿಂಧೂ)

ನಮೋ ಹಿಂದೂ ಸನಾತನ ಧರ್ಮ,ಜೈ ಹಿಂದ್

No comments:

Post a Comment